ಆಟೋ ಚಾಲಕ ತನ್ನ ಡ್ರೈವರ್ ಸೀಟ್ ಅನ್ನು ಆಫೀಸ್ ಚೇರ್ ಆಗಿ ಅಪ್‌ಗ್ರೇಡ್ ಮಾಡಿದ್ದು, ಇದರ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.
@shivaniiiiiii_ ಎಂಬ ಟ್ವಿಟರ್ ಖಾತೆಯಲ್ಲಿ ಈ ಆಟೋ ಚಾಲಕನ ಫೋಟೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗಿದೆ.ಸೆಪ್ಟೆಂಬರ್ 23ರಂದು ಹಂಚಿಕೊಂಡಿರುವ ಈ ಫೋಸ್ಟ್ ಅನ್ನು ಒಂದೇ ದಿನದಲ್ಲಿ 76 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಸದ್ಯ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.
ಎಷ್ಟೇ ಟ್ರಾಫಿಕ್ ಇದ್ದರೂ ಕೂಡ ಆರಾಮಾಗಿ ಆಟೋ ಚಲಾಯಿಸಲು ಆಗುವಂತೆ ಕೂರಲು ಆಟೋಗೆ ಆಫೀಸ್ ಚೇರ್ ಫಿಟ್ ಮಾಡಿರುವುದನ್ನು ಕಾಣಬಹುದು. ಸದ್ಯ ಈ ಆಟೋ ಚಾಲಕನ ಕ್ರಿಯೇಟಿವ್ ಐಡಿಯಾಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಆಟೋ ಡ್ರೈವರ್ ಕ್ರಿಯೇಟಿವ್ ಐಡಿಯಾಗೆ ನೆಟ್ಟಿಗರು ಫಿದಾ!
Leave a comment
Leave a comment