ಅವಕಾಶಕ್ಕಾಗಿ ಕಾಯಬೇಡಿ. ನೀವೇ ಸ್ವಂತ ಅವಕಾಶಗಳನ್ನು ಸೃಷ್ಟಿಸಿ: ರತನ್‌ ಟಾಟಾ ಪ್ರಸಿದ್ದ ನುಡಿ ಮುತ್ತುಗಳು

public wpadmin

ನಿಮ್ಮ ಬೇರುಗಳನ್ನು ಎಂದಿಗೂ ಮರೆಯಬೇಡಿ, ಮತ್ತು ನೀವು ಎಲ್ಲಿಂದ ಬಂದಿದ್ದೀರಿ ಎಂಬುದರ ಬಗ್ಗೆ ಯಾವಾಗಲೂ ಹೆಮ್ಮೆಪಡಬೇಕು. ಅವಕಾಶ ಬರಬೇಕೆಂದು ಕಾಯಬೇಡಿ. ನೀವೇ ಸ್ವಂತ ಅವಕಾಶಗಳನ್ನು ಸೃಷ್ಟಿಸಿ – ಇದು ರತನ್‌ ಟಾಟಾ ಹೇಳಿದ ಮಾತುಗಳು.

ಭಾರತದ (India) ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ರತನ್‌ ಟಾಟಾ ಮನಸ್ಸು ದೇಶದ ಅಭಿವೃದ್ಧಿಗೆ ಮಿಡಿಯುತ್ತಿತ್ತು. ಈ ಕಾರಣಕ್ಕೆ ತಮ್ಮ ಶೇ.60 ರಷ್ಟು ಸಂಪತ್ತನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದರು. ಪ್ರಚಾರದಿಂದ ದೂರ ಇದ್ದ ರತನ್‌ ಟಾಟಾ ಕೆಲಸದಲ್ಲಿ ಶ್ರದ್ಧೆ ಹೊಂದಿದ್ದರು. ರತನ್‌ ಟಾಟಾ ಅವರಿಗೆ ಭಾರತ ರತ್ನ ನೀಡಬೇಕೆಂದು ಅಭಿಯಾನ ನಡೆಯುತ್ತಿದ್ದಾಗ ದಯವಿಟ್ಟು ಅಭಿಯಾನ ನಿಲ್ಲಿಸಿ ಎಂದು ಮನವಿ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಒಂದು ವರ್ಗ ವ್ಯಕ್ತಪಡಿಸುತ್ತಿರುವ ಭಾವನೆಯನ್ನು ನಾನು ಗೌರವಿಸುತ್ತೇನೆ. ಹೀಗಿದ್ದರೂ ಪ್ರಶಸ್ತಿ ವಿಚಾರವಾಗಿ ನಡೆಸುತ್ತಿರುವ ಅಭಿಯಾನವನ್ನು ನಿಲ್ಲಿಸಬೇಕೆಂದು ನಾನು ವಿನಯಪೂರ್ವಕವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ. ನಾನು ಭಾರತೀಯನಾಗಿರುವುದು ಅದೃಷ್ಟ ಮತ್ತು ಭಾರತದ ಬೆಳವಣಿಗೆ ಮತ್ತು ಸಮೃದ್ಧಿಗೆ ಕೊಡುಗೆ ನೀಡಲು ಪ್ರಯತ್ನಿಸುತ್ತೇನೆ ಎಂದು ರತನ್‌ ಟಾಟಾ ಹೇಳಿದ್ದರು. 

ನಾನು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ನಂಬುವುದಿಲ್ಲ. ನಾನು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ ಮತ್ತು ನಂತರ ಆ ನಿರ್ಧಾರವನ್ನು ಸರಿಯಾಗುವಂತೆ ಮಾಡುತ್ತೇನೆ. ಯಾರೂ ಕಬ್ಬಿಣವನ್ನು ನಾಶಮಾಡಲು ಸಾಧ್ಯವಿಲ್ಲ. ಆದರೆ ಅದರ ಅದರ ತುಕ್ಕು ಅದನ್ನೇ ನಾಶ ಮಾಡಬಹುದು. ಹಾಗೆಯೇ ಯಾರೂ ಒಬ್ಬ ವ್ಯಕ್ತಿಯನ್ನು ನಾಶಮಾಡಲು ಸಾಧ್ಯವಿಲ್ಲ, ಆದರೆ ಅವರ ಸ್ವಂತ ಮನಸ್ಸೇ ಅವರ  ನಾಶಕ್ಕೆ ಕಾರಣವಾಗಬಹುದು.  ನೀವು ವೇಗವಾಗಿ ನಡೆಯಲು ಬಯಸಿದರೆ ಏಕಾಂಗಿಯಾಗಿ ನಡೆಯಿರಿ. ಆದರೆ ನೀವು ದೂರ ನಡೆಯಲು ಬಯಸಿದರೆ ಒಟ್ಟಿಗೆ ನಡೆಯಿರಿ.

ಯಾವುದೇ ಅಪಾಯವನ್ನು ತೆಗೆದುಕೊಳ್ಳದಿರುವುದು ದೊಡ್ಡ ಅಪಾಯ. ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಸೋಲಾಗದೇ ಇರವ ಏಕೈಕ ತಂತ್ರವೆಂದರೆ ಅಪಾಯಗಳನ್ನು ತೆಗೆದುಕೊಳ್ಳದಿರುವುದು.

ಇತರರೊಂದಿಗೆ ನಿಮ್ಮ ಸಂವಹನದಲ್ಲಿ ದಯೆ, ಸಹಾನುಭೂತಿ ಮತ್ತು ಸಹಾನುಭೂತಿಯ ಶಕ್ತಿಯನ್ನು ಎಂದಿಗೂ ಕಡಿಮೆ ಅಂದಾಜು ಮಾಡಬೇಡಿ.ನಾಯಕನಾಗುವುದು ಎಂದರೆ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು, ಮನ್ನಿಸುವಿಕೆಯಲ್ಲ. ಜನರು ನಿಮ್ಮ ಮೇಲೆ ಎಸೆಯುವ ಕಲ್ಲುಗಳನ್ನು ತೆಗೆದುಕೊಳ್ಳಿ ಮತ್ತು ಆ ಕಲ್ಲುಗಳ ಬಳಸಿ ಸ್ಮಾರಕವನ್ನು ನಿರ್ಮಿಸಿ.

ಜೀವನದಲ್ಲಿ ಏರಿಳಿತಗಳು ಇದ್ದಾಗ ಮಾತ್ರ ನಾವು ಮುಂದುವರಿಯಬಹುದು. ಏಕೆಂದರೆ ಇಸಿಜಿಯಲ್ಲಿ ಸರಳ ರೇಖೆ ಇದ್ದರೆ ನಾವು ಜೀವಂತವಾಗಿಲ್ಲ ಎಂದರ್ಥ.

ಗೆಲುವಿನ ಏಕೈಕ ಮಾರ್ಗವೆಂದರೆ ಸೋಲಿಗೆ ಹೆದರದಿರುವುದು.

ನಿಮ್ಮ ಬೇರುಗಳನ್ನು ಎಂದಿಗೂ ಮರೆಯಬೇಡಿ, ಮತ್ತು ನೀವು ಎಲ್ಲಿಂದ ಬಂದಿದ್ದೀರಿ ಎಂಬುದರ ಬಗ್ಗೆ ಯಾವಾಗಲೂ ಹೆಮ್ಮೆಪಡಬೇಕು.

 ಕಠಿಣ ಮಾರ್ಗವಾಗಿದ್ದರೂ ಸಹ ನಿಮ್ಮ ಮೌಲ್ಯಗಳು ಮತ್ತು ತತ್ವಗಳ ಮೇಲೆ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ.

Share This Article
Leave a comment