ಪ್ರಚಾರದ ತೆವಲಿಗಾಗಿ ಜನನಿಬಿಡ ರಸ್ತೆಯಲ್ಲಿ ಯುವತಿಯೊಬ್ಬಳು ಬರೀ ಬ್ರಾ ತೊಟ್ಟು ಬಿದಿ ಸುತ್ತಿರುವ ಘಟನೆ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ರೀಲ್ಸ್‌ಗಾಗಿ ಯುವತಿಯೊಬ್ಬಳು ಡೆನಿಮ್ ಹಾಗೂ ಬರೀ ಬ್ರಾ ಧರಿಸಿ ಜನನಿಬಿಡ ಪ್ರದೇಶದಲ್ಲಿ ಓಡಾಡುವ ಮೂಲಕ ಇತರರರಿಗೆ ಮುಜುಗರವನ್ನು ಉಂಟುಮಾಡಿದ್ದಾಳೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ಸ್ಥಳಗಳಲ್ಲಿ ಇದೆಂಥಾ ವರ್ತನೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.
ತನ್ನ ಬಗ್ಗೆ ನೆಗೆಟಿವ್ ಕಾಮೆಂಟ್‌ಗಳು ಮತ್ತು ಟೀಕೆಗಳು ಬರಲಾರಂಭಿಸಿದ್ದೇ ತಡ ಆ ಯುವತಿ ʼನನ್ನನ್ನು ಕ್ಷಮಿಸಿ ಬಿಡಿ ಸಾರ್ವಜನಿಕ ಸ್ಥಳದಲ್ಲಿ ನಾನು ಆ ರೀತಿಯ ಬಟ್ಟೆಯನ್ನು ಧರಿಸಿ ಓಡಾಡಬಾರದಿತ್ತು, ನನ್ನ ಈ ವರ್ತನೆಯಿಂದ ನಿಮ್ಮ ಭಾವನೆಗಳಿಗೆ ನೋವುಂಟಾಗಿದ್ದರೆ ನನ್ನನ್ನು ಕ್ಷಮಿಸಿʼ ಎಂದು ಕ್ಷಮಾಪಣೆ ಕೇಳಿದ್ದಾಳೆ.
ಅಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಹುಚ್ಛಾಟ ಮೆರೆದಿದ್ದಕ್ಕಾಗಿ ಬಜರಂಗದಳ ಸೇರಿದಂತೆ ಇತರೆ ಸಂಘಟನೆಗಳು ಆಕೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.