ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸದ್ಯ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆಯ ನಟಿಯರಲ್ಲಿ ಒಬ್ಬರು. ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲಿ ಕನ್ನಡತಿ ರಶ್ಮಿಕಾಗೆ ಇರುವ ಡಿಮ್ಯಾಂಡ್ ಅಷ್ಟಿಷ್ಟಲ್ಲ. ಯಾವುದೇ ಟಾಪ್ ನಟಿಯನ್ನು ಹಿಂದಿಕ್ಕಿ ಮುಂದೆ ನಿಲ್ತಾರೆ ಈ ಕೂರ್ಗ್ ಬ್ಯೂಟಿ. ರಶ್ಮಿಕಾ ಮಂದಣ್ಣ ಅವರಿಗೆ ಸದ್ಯ ಚಿತ್ರರಂಗದಲ್ಲಿರುವ ಡಿಮ್ಯಾಂಡ್ ಕಡಿಮೆ ಅಲ್ಲ. ಭರ್ಜರಿ ಆಫರ್ಗಳನ್ನು ಪಡೆಯುತ್ತಲೇ ಇರುತ್ತಾರೆ ಈ ಮುದ್ದಾದ ನಟಿ. ಅಷ್ಟೇ ಅಲ್ಲದೆ ನಟಿ ಏಕಕಾಲಕ್ಕೆ ಹಲವಾರು ಪ್ರಾಜೆಕ್ಟ್ ಒಪ್ಪಿಕೊಂಡು ಕೆಲಸ ಮಾಡುತ್ತಲೇ ಇರುತ್ತಾರೆ. ಆದರೆ ರಶ್ಮಿಕಾ ಮಂದಣ್ಣ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಾಗಲೀ, ಟಿವಿಗಳಲ್ಲಾಗಲೀ ಬಹಳ ದಿನಗಳಿಂದ ಎಲ್ಲೂ ಕಾಣಿಸಿಕೊಂಡಿರಲಿಲ್ಲ.
ರಶ್ಮಿಕಾ ಮಂದಣ್ಣ ಎಲ್ಲೂ ಕಾಣಿಸದೇ ಇರೋದ್ರಿಂದ ಅಭಿಮಾನಿಗಳಲ್ಲಿ ಈ ನಟಿ ಬಗ್ಗೆ ಹಲವಾರು ಕುತೂಹಲಗಳು, ಚರ್ಚೆಗಳು ನಡೆಯುತ್ತಲೇ ಇತ್ತು. ಆದ್ರೆ ಇದೀಗ ಈ ಎಲ್ಲ ಪ್ರಶ್ನೆಗಳಿಗೆ ನಟಿ ರಶ್ಮಿಕಾ ಮಂದಣ್ಣ ತೆರೆ ಎಳೆದಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರಿಗೆ ಕೆಲ ವಾರಗಳ ಹಿಂದೆಯಷ್ಟೇ ಕಾರು ಅಪಘಾತವಾಗಿತ್ತು. ಈ ಬಗ್ಗೆ ಸ್ವತಃ ಅವರೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ, ರಶ್ಮಿಕಾ ತನಗಾದ ಅಪಘಾತದಿಂದಾಗಿ ಕೆಲವು ಸಮಯದಿಂದ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ. ಸದ್ಯ ವೈದ್ಯರು ರಶ್ಮಿಕಾಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ರಶ್ಮಿಕಾ ಅವರ ಈ ಪೋಸ್ಟ್‌ನಿಂದ ಅಭಿಮಾನಿಗಳು ಶಾಕ್ ಗೊಂಡಿದ್ದು, ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಇನ್ನು ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ನಟಿ ರಶ್ಮಿಕಾ ಮಂದಣ್ಣ ‘ಹೌದು, ನಾನು ಕೆಲದಿನಗಳಿಂದ ಸೋಷಿಯಲ್ ಮೀಡಿಯಾ, ಸಾರ್ವಜನಿಕವಾಗಿ ಆ್ಯಕ್ಟಿವ್ ಆಗಿಲ್ಲ ಎಂದು ನನಗೆ ತಿಳಿದಿದೆ. ಕಾರಣ ಕಳೆದ ತಿಂಗಳು ನನಗೆ ಅಪಘಾತವಾಗಿತ್ತು. ಆ್ಯಕ್ಸಿಡೆಂಟ್ ಸಣ್ಣದಾಗಿ ಆಗಿದೆ. ಆದರೆ ವೈದ್ಯರು ಸದ್ಯಕ್ಕೆ ವಿಶ್ರಾಂತಿ ಪಡೆಯುವಂತೆ ಹೇಳಿದ್ದಾರೆ.
ಈಗ ನಾನು ಮೊದಲಿಗಿಂತ ಉತ್ತಮವಾಗಿದ್ದೇನೆ. ನಿಮ್ಮ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಜೀವನದಲ್ಲಿ ಏನನ್ನೂ ಹೇಳಲಾಗುವುದಿಲ್ಲ, ಇದು ತುಂಬಾ ಅನಿರೀಕ್ಷಿತವಾಗಿದೆ. ನಾಳೆ ಇರುತ್ತೋ ಇಲ್ಲವೋ ಗೊತ್ತಿಲ್ಲ, ಸದಾ ಖುಷಿಯಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.