ಬೆಂಗಳೂರು: ಇಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನೆಚ್ಚಿನ ನಟನ ಹುಟ್ಟುಹಬ್ಬ ಆಚರಣೆ ಮಾಡಲು ಜಿಲ್ಲೆ ಜಿಲ್ಲೆಯಿಂದ ಸಾಕಷ್ಟು ಅಭಿಮಾನಿಗಳು ಬಂದಿದ್ದರು. ಜಯನಗರದ ಎಂಇಎಸ್ ಗ್ರೌಂಡ್ನಲ್ಲಿ ಅಭಿಮಾನಿಗಳಿಗಾಗಿಯೇ ಬರ್ತ್ ಡೇ ಕೇಕ್ ಕಟಿಂಗ್ ಹಮ್ಮಿಕೊಂಡಿದ್ದರು. ಹೀಗಾಗಿ ಇಂದು ಬೆಳಗ್ಗೆಯಿಂದಲೇ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಕಿಚ್ಚ ಸುದೀಪ್ ಅವರು ಬಂದ ಕೂಡಲೃ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಇನ್ನು ಇದೇ ವೇಳೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಕಿಚ್ಚ ಸುದೀಪ್, ಅಭಿಮಾನಿಗಳು ತೋರಿಸೋ ಪ್ರೀತಿಯಿಂದ ನಾನು ಇವತ್ತು ಇಲ್ಲಿದ್ದೀನಿ. ಅಭಿಮಾನಿಗಳು ನಮ್ಮ ಪ್ರತಿಬಿಂಬ. ನಾನು ಹೋದಲ್ಲೆಲ್ಲಾ ತಲೆ ಎತ್ಕೊಂಡು ಓಡಾಡ್ತೀನಿ ಅಂದ್ರೆ ಅದಕ್ಕೆ ಅಭಿಮಾನಿಗಳೇ ಕಾರಣ. ಅಭಿಮಾನಿಗಳಿಗೆ ಕಳಂಕ ತರೋ ಕೆಲಸ ಮಾಡಲ್ಲ. ಬರೀ ಸಿನಿಮಾದಿಂದ ಹೀರೋ ಆಗೋಕೆ ಆಗಲ್ಲ. ವ್ಯಕ್ತಿತ್ವದಿಂದ ನಾವು ದೊಡ್ಡೋರು ಆಗೋಕೆ ಸಾಧ್ಯ.
ನಾವು ಬೆಳಗ್ಗೆ ಎದ್ದು ಮುಖಕ್ಕೆ ಮೇಕಪ್ ಹಾಕೋದೆ ನಿಮಗೋಸ್ಕರ. ಅಭಿಮಾನಿಗಳಿಂದ ಬರೋ ಕೂಗು ನನ್ನನ್ನು ತಗ್ಗಿಸಿ, ಬಗ್ಗಿಸಿ ಇರುವಂತೆ ಮಾಡುತ್ತೆ. ನನ್ನ ಫ್ಯಾನ್ಸ್ ಒಳ್ಳೆಯವ್ರು. ಅದಕ್ಕೆ ನಾನು ಒಳ್ಳೆಯವನಾಗಿದ್ದೇನೆ. ನನ್ನ ಅಭಿಮಾನಿಗಳಿಂದ ನಾನಿದ್ದೇನೆ. ಆದಷ್ಟು ಬೇಗ ಮ್ಯಾಕ್ಸ್ ರಿಲೀಸ್ ಡೇಟ್ ಹೇಳ್ತೀನಿ. ಮ್ಯಾಕ್ಸ್ ಸಿನಿಮಾ ತಡ ಆಯ್ತು. ಆದ್ರೆ ಆದಷ್ಟು ಬೇಗ ಸಿನಿಮಾ ರಿಲೀಸ್ ಆಗುತ್ತೆ ಎಂದಿದ್ದಾರೆ.