ಭಾರಿ ಮೊತ್ತಕ್ಕೆ ಉಪೇಂದ್ರ ನಿರ್ದೇಶನದ ‘ಯುಐ’ ವಿತರಣೆ ಹಕ್ಕು ಖರೀದಿಸಿದ ಕೆವಿಎನ್ ಪ್ರೊಡಕ್ಷನ್ಸ್

public wpadmin

ರಿಯಲ್ ಸ್ಟಾರ್ ಉಪೇಂದ್ರ (Upendra) ನಟಿಸಿದ ಸಿನಿಮಾಗಳಿಗೆ ಕ್ರೇಜ್ ಇರುತ್ತೋ ಇಲ್ಲವೋ. ಆದ್ರೆ, ಉಪ್ಪಿ ಡೈರೆಕ್ಷನ್ ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳಿದ್ದಾರೆ, ಅಂದ್ರೆ ಇಡೀ ಇಂಡಸ್ಟ್ರಿ ಆ ಸಿನಿಮಾಗಾಗಿ ಎದುರು ನೋಡುತ್ತಿರುತ್ತೆ ಅನ್ನೋ ಮಾತು ಸಹಜ. ಸಿನಿ ಪ್ರೇಮಿಗಳಂತೂ ಆ ಸಿನಿಮಾವನ್ನ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ. ಈದೀಗ ಉಪೇಂದ್ರ ನಟಿಸಿ ನಿರ್ದೇಶಿಸಿರುವ `ಯುಐ’ ಚಿತ್ರದ (UI Cinema) ಕನ್ನಡದ ಹಂಚಿಕೆ ಹಕ್ಕನ್ನು ಕೆವಿಎನ್ ಪ್ರೊಡಕ್ಷನ್ಸ್ (KVN Productions) ಭಾರೀ ಮೊತ್ತಕ್ಕೆ ಪಡೆದುಕೊಂಡಿದೆ.

ಕನ್ನಡದ ಬಹುಕೋಟಿ ಬಜೆಟ್ ಚಿತ್ರ ಡಿಸೆಂಬರ್ 20ಕ್ಕೆ ಬಹುಭಾಷೆಯಲ್ಲಿ ವಿಶ್ವಾದ್ಯಂತ ರಿಲೀಸ್ ಆಗಲಿದ್ದು ಚಿತ್ರವನ್ನು ಲಹರಿ ಫಿಲಮ್ಸ್‌ (Lahari Films) ಹಾಗೂ ವೀನಸ್ ಎಂಟರ್ಟೈನರ್ಸ್‌ ಅಡಿಯಲ್ಲಿ ಮನೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಿಸಿದ್ದಾರೆ.

ಚಿತ್ರದ ಇತರೆ ಭಾಷೆಯ ಹಂಚಿಕೆ ಹಕ್ಕುಗಳು ಈಗಾಗ್ಲೇ ಬಹುಕೋಟಿಗೆ ಸೇಲ್ ಆಗಿದೆ, ಮಲಯಾಳಂ ಹಂಚಿಕೆ ಹಕ್ಕನ್ನ ಸಿ.ಜೆ ರಾಯ್ ಪಡೆದುಕೊಂಡ್ರೆ, ತಮಿಳಿನಲ್ಲಿ ಎ.ಪಿ ಇಂಟರ್‌ನ್ಯಾಷನಲ್‌ ಫಿಲಮ್ಸ್‌ ಶನ್ ಹಂಚಿಕೆಯನ್ನ ತಮ್ಮದಾಗಿಸಿಕೊಂಡಿದೆ. ತೆಲುಗಿನಲ್ಲಿ ಅಲ್ಲು ಅರವಿಂದ್ ಒಡೆತನದ ಗೀತಾ ಆರ್ಟ್ಸ್ ಸಂಸ್ಥೆ ಹಂಚಿಕೆ ಹಕ್ಕುಪಡೆದುಕೊಂಡಿದೆ. ಹಿಂದಿ ಭಾಷೆಯಲ್ಲೂ ಹಂಚಿಕೆಯ ಹಕ್ಕು ಮಾರಾಟವಾಗಿದ್ದು ನಾಳೆ (ನ.25) ಘೋಷಣೆಯಾಗಲಿದೆ.

Share This Article
Leave a comment