ಬೆಳಗಾವಿ| ಉದ್ಯಮಿ ಹತ್ಯೆ ಕೇಸ್ – 13 ಹಾರ್ಡ್ ಡಿಸ್ಕ್‌ಗಳಲ್ಲಿ ಸಂತೋಷ್‍ನ ಖಾಸಗಿ ವೀಡಿಯೋ ಪತ್ತೆ!

public wpadmin

ಬಳ್ಳಾರಿ: ಬೆಳಗಾವಿಯಲ್ಲಿ ಉದ್ಯಮಿ ಸಂತೋಷ್ ಪದ್ಮನ್ನವರ ಹತ್ಯೆ ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆತನ ಕರಾಳ ಮುಖದ ಪರಿಚಯವಾಗಿದೆ. ಹತ್ಯೆಯಾದ ಉದ್ಯಮಿಯ ಮನೆ ತಪಾಸಣೆ ವೇಳೆ ಆತ ಬೇರೆ ಬೇರೆ ಹೆಣ್ಣುಗಳ ಜೊತೆ ಕಳೆದ ಖಾಸಗಿ ವೀಡಿಯೋಗಳಿರುವ 13 ಹಾರ್ಡ್ ಡಿಸ್ಕ್‌ಗಳು ಪತ್ತೆಯಾಗಿವೆ.

ಡಿಸ್ಕ್‌ಗಳು, ಸಿಸಿಟಿವಿ ಡಿವಿಆರ್, ಮೂರು ಪೆನ್‍ಡ್ರೈವ್‍ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇವುಗಳನ್ನು ಪರಿಶೀಲನೆಗಾಗಿ ಎಫ್‍ಎಸ್‍ಎಲ್‍ಗೆ ಕಳಿಸಿದ್ದಾರೆ. ಅ.9ರಂದು ಹೃದಯಾಘಾತದಿಂದ ಸಂತೋಷ್ ಮೃತಪಟ್ಟಿದ್ದಾನೆ ಎಂದು ಅಂತ್ಯಸಂಸ್ಕಾರ ಮಾಡಲಾಗಿತ್ತು. ಈ ಬಗ್ಗೆ ಸಂಶಯ ಬಂದು ಅ.14ರಂದು ತಾಯಿ ಸೇರಿ 5 ಜನರ ವಿರುದ್ಧ ಸಂತೋಷ್‍ನ ಮಗಳು ಕೊಲೆ ಕೇಸ್ ದಾಖಲಿಸಿದ್ದರು. ಪ್ರಕರಣ ತನಿಖೆ ನಡೆಸಿದಾಗ, ಪತ್ನಿ ಉಮಾ ಹಾಗೂ ಇಬ್ಬರು ಫೇಸ್‍ಬುಕ್ ಗೆಳೆಯರು ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು.

Share This Article
Leave a comment