ಈಗಂತೂ ಚಿಕ್ಕ-ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಕಣ್ಣಿನ ಸಮಸ್ಯೆಗಳು ಸಾಮಾನ್ಯವಾಗಿಬಿಟ್ಟಿವೆ. ಆದರೆ ಆಯುರ್ವೇದದ ಸಾಂಪ್ರದಾಯಿಕ ಭಾರತೀಯ ವೈದ್ಯಕೀಯ ವಿಜ್ಞಾನವು ಕಣ್ಣಿನ ದೃಷ್ಟಿಯನ್ನು ಕಾಪಾಡಿಕೊಳ್ಳಲು ಹಲವಾರು ನೈಸರ್ಗಿಕ ವಿಧಾನಗಳನ್ನು ತಿಳಿಸಿಕೊಡುತ್ತದೆ.
ಹೌದು, ಆಯುರ್ವೇದದ ಪ್ರಕಾರ, ಬೆಳಗ್ಗೆ ತಣ್ಣೀರಿನಿಂದ ಕಣ್ಣುಗಳನ್ನು ಶುದ್ಧೀಕರಿಸುವುದು ಕಣ್ಣುಗಳನ್ನು ಶಾಂತಗೊಳಿಸಲು ಸಹಕಾರಿಯಾಗಿದೆ. ಆದರೆ ಇದನ್ನು ಮಾಡುವಾಗ ನಿಮ್ಮ ಬಾಯಿಯಲ್ಲಿ ನೀರನ್ನು ಹಿಡಿದುಕೊಳ್ಳಿ ಎಂದು ಸಲಹೆ ನೀಡಲಾಗುತ್ತದೆ. ಏಕೆಂದರೆ ಇದು ದೇಹದ ಉಷ್ಣತೆಯನ್ನು ಸಮತೋಲನಗೊಳಿಸುತ್ತದೆ. ಹಾಗೆಯೇ ಅತಿಯಾದ ತಣ್ಣನೆಯ ನೀರನ್ನು ಬಳಸುವುದನ್ನು ತಪ್ಪಿಸಿ. ಇದು ಕಣ್ಣುಗಳನ್ನು ಕೆರಳಿಸಬಹುದು.
ಇನ್ನು ತ್ರಾಟಕವು ಧ್ಯಾನದ ಅಭ್ಯಾಸವಾಗಿದ್ದು, ಇಲ್ಲಿ ನೀವು ಸಾಂಪ್ರದಾಯಿಕವಾಗಿ ತುಪ್ಪದ ದೀಪದ ಜ್ವಾಲೆಯ ಮೇಲೆ ಕೇಂದ್ರೀಕರಿಸುತ್ತೀರಿ. ಇದಕ್ಕಾಗಿ ಕತ್ತಲೆಯ ಕೋಣೆಯಲ್ಲಿ ಶಾಂತವಾಗಿ ಕುಳಿತು, ಕೆಲವು ನಿಮಿಷಗಳ ಕಾಲ ಕಣ್ಣು ಮಿಟುಕಿಸದೆ ಜ್ವಾಲೆಯತ್ತ ದೃಷ್ಟಿ ಹಾಯಿಸಿ. ಹೀಗೆ ಮಾಡುವುದು ನಿಮ್ಮ ಕಣ್ಣುಗಳನ್ನು ಬಲಪಡಿಸುತ್ತದೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
ಕಣ್ಣಿನ ಅಂಗಾಂಶಗಳಲ್ಲಿನ ಉರಿಯೂತವನ್ನು ನಿವಾರಿಸಲು ವಿವಿಧ ಆಯುರ್ವೇದ ಚಿಕಿತ್ಸೆಗಳಲ್ಲಿ ಔಷಧಿಯಾಗಿ ತುಪ್ಪವನ್ನು ಬಳಸಲಾಗುತ್ತದೆ. ಸುಲಭವಾಗಿ ಮಾಡಬಹುದಾದ ಕಣ್ಣಿನ ವ್ಯಾಯಾಮಗಳು ಕಣ್ಣುಗಳ ಸುತ್ತ ಉತ್ತಮ ರಕ್ತಪರಿಚಲನೆಯನ್ನು ಬೆಂಬಲಿಸಲು ಮತ್ತು ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಕಾರಿಯಾಗಿದೆ.
ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಯುರ್ವೇದದ ಪ್ರಕಾರ ಸಮತೋಲಿತ ಆಹಾರವನ್ನು ಸೇವಿಸುವ ಅಗತ್ಯವಿದೆ.