ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಾಸ್ಯ ನಟ ಮಂಜು ಪಾವಗಡ; ಗಣ್ಯರಿಂದ ಶುಭ ಹಾರೈಕೆ

public wpadmin

ಕನ್ನಡ ಕಿರುತೆರೆ ನಟ, ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಮಂಜು ಪಾವಗಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರು ಮೂಲದ ನಂದಿನಿ ಜೊತೆ ಮಂಜು ಪಾವಗಡ ಸಪ್ತಪದಿ ತುಳಿದಿದ್ದಾರೆ.

ಬಿಗ್​ಬಾಸ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ಅವರು ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಗುರು ಹಿರಿಯರ ಸಮ್ಮುಖದಲ್ಲಿ ಮಂಜು ಮತ್ತು ನಂದಿನಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಪಾವಗಡದಲ್ಲಿ ಮದುವೆ ಸಮಾರಂಭ ನಡೆದಿದೆ.
ನಿನ್ನೆ ಮತ್ತು ಇವತ್ತು ಮದುವೆ ಕಾರ್ಯಕ್ರಮಗಳು ನಡೆದವು. ಇದೀಗ ಮಂಜು ಪಾವಗಡ ಮದುವೆ ಕ್ಷಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು, ಗಣ್ಯರು ಶುಭ ಹಾರೈಸುತ್ತಿದ್ದಾರೆ. ಮಂಜು ಅವರ ಕೈಹಿಡಿದ ಹುಡುಗಿ ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದಾರೆ.

ಹಾಸ್ಯ ನಟನಾಗಿ ಮಂಜು ಪಾವಗಡ ಅವರು ಕಿರುತೆರೆ ವೀಕ್ಷಕರ ನೆಚ್ಚಿನ ನಟರಲ್ಲಿ ಒಬ್ಬರಾಗಿದ್ದಾರೆ. ತಮ್ಮ ಸರಳತೆ, ಹಾಸ್ಯ ಪ್ರಜ್ಞೆಯಿಂದಲೇ ಮನೆ ಮಾತಾಗಿರುವ ನಟ ಬಿಗ್ ಬಾಸ್ ಮೂಲಕ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದರು. ಇತ್ತೀಚೆಗೆ ಮಂಜು ಪಾವಗಡ ಬೆಂಗಳೂರಿನಲ್ಲಿ ತಮ್ಮ ಹೊಸ ಮನೆಗೆ ಪ್ರವೇಶ ಮಾಡಿದ್ದಾರೆ.

Share This Article
Leave a comment