ವ್ಯಾಯಾಮ ಎಂದರೆ ಹೆಚ್ಚಿನವರು ಜಿಮ್ ಕಡೆಗೆ ಮುಖ ಮಾಡುತ್ತಾರೆ. ಜಿಮ್‌ನಲ್ಲಿ ಸಾಕಷ್ಟು ಉಪಕರಣಗಳು ಇರುವುದರಿಂದ ದೇಹಕ್ಕೆ ಬೇಕಾದ ವ್ಯಾಯಾಮ ಮಾಡಬಹುದು ನಮ್ಮನ್ನು ನಾವು ಫಿಟ್ ಆಗಿ ಇರಿಸಿಕೊಳ್ಳಬಹುದು. ಜೊತೆಗೆ ಅಲ್ಲಿ ಜಿಮ್ ಟ್ರೈನರ್‌ಗಳು ಕೂಡ ಇರುವುದರಿಂದ ಅವರಿಂದ ಸಲಹೆ ಪಡೆದುಕೊಂಡು ವ್ಯಾಯಾಮ ಮಾಡಬಹುದು ಎಂಬುದು ಹೆಚ್ಚಿನವರ ಯೋಚನೆಯಾಗಿರುತ್ತದೆ. ಆದರೆ ಎಲ್ಲರಿಗೂ ಜಿಮ್‌ಗೆ ಹೋಗುವ ಅವಕಾಶ ದೊರೆಯುವುದಿಲ್ಲ ಕಾರಣಾಂತರಗಳಿಂದ ಜಿಮ್‌ಗೆ ಹೋಗಲು ಹೆಚ್ಚಿನವರಿಗೆ ಸಾಧ್ಯವಾಗುವುದಿಲ್ಲ ಈ ಸಮಯದಲ್ಲಿ ಅವರು ಮನೆಯಲ್ಲೇ ಮಾಡುವ ವ್ಯಾಯಾಮಗಳಿಗೆ ಒತ್ತು ನೀಡುತ್ತಾರೆ.
ಫ್ಯಾಟ್ ಬರ್ನ್ ಮಾಡಿ ನಿಮ್ಮ ಎನರ್ಜಿ ಲೆವೆಲ್ ಹೆಚ್ಚಿಸುವ ಅಂತೆಯೇ ನಿಮ್ಮ ಆಕಾರವನ್ನು ಸುಂದರಗೊಳಿಸುವ ವ್ಯಾಯಾಮಗಳ ಬಗ್ಗೆ ತಿಳಿಸುತ್ತಿದ್ದೇವೆ. ಈ ವರ್ಕೌಟ್‌ಗಳನ್ನು ಮನೆಯಲ್ಲೇ ಮಾಡಬಹುದಾಗಿದ್ದು ಇನ್ನಷ್ಟು ಅನುಕೂಲಕರ ಎಂದೆನಿಸಲಿದೆ.
ಪುಶ್-ಅಪ್ಸ್
ಪುಶ್ ಅಪ್ಸ್ ಹೆಚ್ಚಾಗಿ ಸ್ಟ್ರೆಂಥ್ ಬಿಲ್ಡ್ ಮಾಡುವ ವ್ಯಾಯಾಮವನ್ನಾಗಿ ಪರಿಗಣಿಸಲಾಗುತ್ತದೆ. ಇದು ಎದೆ, ಭುಜ, ಟ್ರೈಸಪ್ಸ್‌ಗೆ ಉತ್ತಮ ವ್ಯಾಯಾಮ ನೀಡುತ್ತದೆ. ಈ ಭಾಗಗಳಲ್ಲಿ ಮಸಲ್ ಮಾಸ್‌ಗಳನ್ನು ಹೆಚ್ಚಿಸುತ್ತದೆ ಹಾಗೂ ರೆಸ್ಟಿಂಗ್ ಮೆಟಬೋಲಿಕ್ ರೇಟ್ ಅನ್ನು ಏರಿಕೆ ಮಾಡುತ್ತದೆ ಮತ್ತು ವಿಶ್ರಾಂತಿ ವೇಳೆಯಲ್ಲೂ ಹೆಚ್ಚು ಕ್ಯಾಲೊರಿ ಬರ್ನ್ ಮಾಡಲು ಸಹಕಾರಿಯಾಗಿದೆ. 10 ರಿಂದ 15 ರಿಪಿಟೇಶನ್‌ಗಳಲ್ಲಿ ಮೂರು ಸೆಟ್‌ಗಳಲ್ಲಿ ಪುಶ್ ಅಪ್ ಮಾಡುವ ಗುರಿಯನ್ನಿರಿಸಿಕೊಳ್ಳಿ.
ನಿಮ್ಮ ಲೋವರ್ ಬಾಡಿಗೆ ಅತ್ಯುತ್ತಮ ವರ್ಕೌಟ್ ಆಗಿರುವ ಸ್ಕ್ವಾಟ್ಸ್, ಕ್ವಾಡ್ಸ್, ಗ್ಲಟ್ಸ್, ಹ್ಯಾಮ್‌ಸ್ಟ್ರಿಂಗ್ಸ್ ಹಾಗೂ ಕಾಲ್ವ್ಸ್‌ಗೆ ಹೆಚ್ಚಿನ ಒತ್ತು ನೀಡುತ್ತದೆ ಇದರಿಂದ ಈ ಭಾಗಗಳ ಕ್ಯಾಲೊರಿ ಬರ್ನ್ ಮಾಡಲು ಸಹಾಯಕವಾಗಿದೆ.
ಭುಜವನ್ನು ಅಗಲಿಸಿ ನಿಂತುಕೊಳ್ಳಿ ನಂತರ ಭುಜವನ್ನು ಇದೇ ಸ್ಥಿತಿಯಲ್ಲಿರಿಸಿಕೊಂಡು ನಿಮ್ಮ ದೇಹದ ಕೆಳಭಾಗವನ್ನು ಕುರ್ಚಿಯಲ್ಲಿ ಕುಳಿತುಕೊಳ್ಳುವ ಭಂಗಿಯಲ್ಲಿರಿಸಿ. 15-20 ರಿಪಿಟೇಶನ್‌ಗಳಲ್ಲಿ ಮೂರು ಸೆಟ್‌ಗಳಂತೆ ಈ ವ್ಯಾಯಾಮ ಮಾಡಿ.
ನಿಮ್ಮ ಭುಜ ಹಾಗೂ ಬೆನ್ನಿಗೆ ಈ ವ್ಯಾಯಾಮ ಪರಿಣಾಮಕಾರಿಯಾಗಿದೆ. 30 ಸೆಕೆಂಡ್‌ಗಳ ಪ್ಲಾಂಕ್ ಪೊಸಿಶನ್‌ನಲ್ಲಿದ್ದುಕೊಂಡು ನಿಧಾನಕ್ಕೆ 1 ನಿಮಿಷಕ್ಕೆ ಏರಿಸಿಕೊಳ್ಳಿ. ಈ ವ್ಯಾಯಾಮ ಹೆಚ್ಚಿನ ಕ್ಯಾಲೊರಿ ಬರ್ನ್ ಮಾಡುತ್ತದೆ ಹಾಗೂ ಆದಷ್ಟು ಈ ಭಂಗಿಯಲ್ಲಿ ತಲೆಯಿಂದ ಪಾದದವರೆಗೆ ನೀವು ನೇರವಾದ ಭಂಗಿಯನ್ನು ಕಾಪಾಡಿಕೊಳ್ಳಬೇಕು. ಮೂರು ಸೆಟ್‌ಗಳಂತೆ ಆವರ್ತಿಸಿ.
ಲಂಜಸ್
ಲಂಜಸ್ ಒಂದು ಶಕ್ತಿಶಾಲಿ ವ್ಯಾಯಾಮ ಎಂದೆನಿಸಿದ್ದು ದೇಹದ ಕೆಳಭಾಗದ ಪ್ರತಿ ಸ್ನಾಯುಗಳನ್ನು ಬಲಪಡಿಸಿ ಆಕಾರ ನೀಡುತ್ತದೆ. ಆದಷ್ಟು ಸರಿಯಾದ ಭಂಗಿಯಲ್ಲಿ ಲಂಜಸ್ ಮಾಡಿ ಇದರಿಂದ ಈ ಲೋವರ್ ಬಾಡಿ ವ್ಯಾಯಾಮವು ಯಾವುದೇ ಸ್ಟ್ರೆಂಥ್ ಟ್ರೈನಿಂಗ್‌ನ ಭಾಗವಾಗಿ ಮಾರ್ಪಡುತ್ತದೆ.
ಇದೊಂದು ಫುಲ್ ಬಾಡಿ ಹೈ-ಇಂಟೆನ್ಸಿಟಿ ವ್ಯಾಯಾಮ ಎಂದೆನಿಸಿದ್ದು ನಿಮ್ಮ ಹೃದಯದ ಬಡಿತವನ್ನು ಹೆಚ್ಚಿಸುತ್ತದೆ ಜೊತೆಗೆ ಕ್ಯಾಲೊರಿ ಬರ್ನ್ ಅನ್ನು ಮಾಡುತ್ತದೆ. ಕೊಬ್ಬನ್ನು ಕರಗಿಸಲು ದೇಹದಾಕಾರವನ್ನು ಪರಿಪೂರ್ಣವಾಗಿರಿಸಲು ಜಂಪಿಂಗ್ ಜಾಕ್ಸ್ ಸಹಕಾರಿಯಾಗಿದೆ. 30 ಸೆಕೆಂಡ್‌ಗಳ ಜಂಪಿಂಗ್ ಜಾಕ್ಸ್ ಮಾಡಿ 15 ಸೆಕೆಂಡ್ ರೆಸ್ಟ್ ಮಾಡಿ ಹೀಗೆ ಮೂರು ಸೆಟ್‌ಗಳನ್ನು ನಿರ್ವಹಿಸಿ.
ಮೌಂಟನ್ ಕ್ಲೈಂಬರ್ಸ್
ಇದು ಕೂಡ ಹೈ-ಇಂಟೆನ್ಸಿಟಿ ವ್ಯಾಯಾಮ ಎಂದೆನಿಸಿದ್ದು ಕೋರ್, ಲೆಗ್ಸ್ ಹಾಗೂ ಭುಜದ ಮಸಲ್‌ಗಳಿಗೆ ಉತ್ತಮ ವ್ಯಾಯಾಮವನ್ನೊದಗಿಸುತ್ತದೆ.
ಇದು ಕೂಡ ಫ್ಯಾಟ್ ಬರ್ನಿಂಗ್ ವ್ಯಾಯಾಮವಾಗಿ ಪ್ರಚಲಿತದಲ್ಲಿದೆ. 30 ಸೆಕೆಂಡ್ ಮೌಂಟನ್ ಕ್ಲೈಂಬರ್ಸ್ ವ್ಯಾಯಾಮ ಮಾಡಿ 15 ಸೆಕೆಂಡ್ ರೆಸ್ಟ್ ಮಾಡಿ ಹೀಗೆ 3 ಸೆಟ್‌ಗಳನ್ನು ಪುನರಾವರ್ತಿಸಿ.