ಕನ್ನಡದ ನಟಿ ಚೈತ್ರಾ ಆಚಾರ್ ಸುಂದರವಾಗಿಯೇ ಇದ್ದಾರೆ. ಇವರ ಸೌಂದರ್ಯದ ಹೊಳಪು ವಿಭಿನ್ನವಾಗಿಯೇ ಇದೆ. ಆ ಒಂದು ಚೆಲುವಲ್ಲಿ ನಗುವು ಪ್ರಮುಖವಾಗಿಯೇ ಇದೆ. ಚೆಂದದ ನಗುವಿನ ಒಂದಿಷ್ಟು ಫೋಟೋಗಳು ಎಲ್ಲರ ಗಮನ ಸೆಳೆಯುತ್ತಿವೆ. ಆ ಫೋಟೋಗಳನ್ನ ಸ್ವತಃ ಚೈತ್ರಾ ಎಲ್ಲರೊಟ್ಟಿಗೆ ಹಂಚಿಕೊಂಡಿದ್ದಾರೆ.
ಚೈತ್ರಾ ಆಚಾರ್ ಕಪ್ಪು ಬಣ್ಣದ ಡ್ರೆಸ್ ತೊಟ್ಟಿದ್ದಾರೆ. ಇದು ತೀರಾ ಬೋಲ್ಡ್ ಅನಿಸೋದಿಲ್ಲ. ತುಂಬಾನೆ ಗ್ರ್ಯಾಂಡ್ ಆಗಿಯೂ ಇಲ್ಲ. ಆದರೆ, ನೀಟ್ ಆಗಿದೆ. ಸಿಂಪಲ್ ಫೀಲ್ ಕೊಡುತ್ತದೆ. ಕಪ್ಪು ಬಣ್ಣ ಈ ಡ್ರೆಸ್ ಚೈತ್ರಾ ಆಚಾರ್ ಅವರಿಗೆ ತುಂಬಾನೆ ಒಪ್ಪುತ್ತದೆ ಅನ್ನೋ ಭಾವನೆ ಕೂಡ ಮೂಡುತ್ತದೆ.
ಚೈತ್ರಾ ಆಚಾರ್ ಇಲ್ಲಿ ಹೆಚ್ಚು ಎಕ್ಸಸರೀಸ್ ಏನೂ ಧರಿಸಿಲ್ಲ. ಧರಿಸಿರೋ ಕೆಲವೇ ಎಕ್ಸಸರೀಸ್ ಈ ಕಾಸ್ಟೂಮ್‌ಗೆ ಸಾಕು ಅನ್ನುವ ಹಾಗೇನೆ ಇವೆ. ಹಾಗಾಗಿಯೇ ಸಿಂಪಲ್ ಲುಕ್ ಅಲ್ಲಿಯೇ ಚೈತ್ರಾ ಆಚಾರ್ ಸೂಪರ್ ಅನ್ನುವ ಹಾಗೆ ಕಾಣಿಸುತ್ತಿದ್ದಾರೆ.
ಚೈತ್ರಾ ಆಚಾರ್ ಈ ಒಂದಷ್ಟು ಫೋಟೋಗಳಲ್ಲಿ ಒಂದೇ ಆ್ಯಂಗಲ್‌ನಲ್ಲಿಯೇ ಪೋಸ್ ಕೊಟ್ಟಿದ್ದಾರೆ. ಆದರೆ, ಪ್ರತಿ ನಗುವಿನಲ್ಲೂ ಒಂದು ಬದಲಾವಣೆ ಇದ್ದೇ ಇದೆ. ಇದರ ಹೊರತಾಗಿ ಈ ಫೋಟೋಗಳಲ್ಲಿ ಬೇರೆ ಏನೂ ಹೈಲೈಟ್ ಅನಿಸೋದಿಲ್ಲ. ಆದರೆ, ಚೈತ್ರಾ ನಗು ಇಲ್ಲಿ ಹೊಸ ಹೊಳಪನ್ನೆ ತಂದುಕೊಟ್ಟಂತೆ ಇದೆ.
ಚೈತ್ರಾ ಆಚಾರ್ ಸಿನಿಮಾಗಳಲ್ಲಿ ಸದ್ಯ ಮಾರ್ನಮಿ ಸಿನಿಮಾದ ಶೂಟಿಂಗ್ ನಡೆದಿದೆ. ಈ ಒಂದು ಸಿನಿಮಾದಲ್ಲಿ ಕರಾವಳೆ ಕಡೆಯಿ ಹುಲಿನಿ ಕುಣಿತ ಸಂಸ್ಕೃತಿ ಕಥೆ ಇದೆ. ಆದರೆ, ಇದು ಇನ್ನೂ ಬೇರೆ ವಿಚಾರಗಳನ್ನೂ ಹೇಳುತ್ತಿದೆ. ಇದರ ಹೊರತಾಗಿ ಚೈತ್ರಾ ಇನ್ನೂ ಕೆಲವು ಸಿನಿಮಾಗಳನ್ನ ಒಪ್ಪಿದ್ದಾರೆ.
ಚೈತ್ರಾ ಆಚಾರ್ ಎರಡು ತಮಿಳು ಚಿತ್ರಗಳನ್ನ ಒಪ್ಪಿದ್ದಾರೆ. ಈ ಎರಡೂ ಚಿತ್ರಗಳ ಕೆಲಸ ಶುರು ಆಗಿದೆ. ಒಂದು ಚಿತ್ರದಲ್ಲಿ ತಮಿಳು ನಟ ಶಶಿಕುಮಾರ್ ಇದ್ದಾರೆ. ಇದು ಹಳ್ಳಿ ಹಿನ್ನೆಲೆಯ ಸಿನಿಮಾ ಆಗಿದೆ. ಆದರೆ, ಸಿದ್ಧಾರ್ಥ್ ಜೊತೆಗೆ ನಟಿಸ್ತಿರೋ ಸಿನಿಮಾ ಬೇರೆ ರೀತಿಯ ಜಾನರ್‌ನ ಚಿತ್ರವೇ ಆಗಿದೆ.