ಜೊತೆ ಜೊತೆಯಲಿ, ಲಕ್ಷ್ಮಿ ನಿವಾಸ ಖ್ಯಾತಿಯ ಮಾನಸ ಮನೋಹರ್ (Mansa Manohar) ಅವರು ಅದ್ಧೂರಿಯಾಗಿ 2ನೇ ಮದುವೆಯಾಗಿದ್ದಾರೆ. ಗ್ರ್ಯಾಂಡ್ ವೆಡ್ಡಿಂಗ್‌ನ (Wedding) ಸುಂದರ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪ್ರೀತಂ ಚಂದ್ರ ಜೊತೆ ಮಾನಸ ಮದುವೆ ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆದಿದೆ. ಇದೀಗ ನವಜೋಡಿಗೆ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ. ಅಂದಹಾಗೆ, ಇತ್ತೀಚೆಗೆ ನಟಿ ನಿಶ್ಚಿತಾರ್ಥದ ಸಂಭ್ರಮದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಆಗ 2ನೇ ಮದುವೆನಾ? ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದರು. ಅದಕ್ಕೆ ನಟಿ ಖಡಕ್ ಆಗಿ ಉತ್ತರ ನೀಡಿದರು. ಎಲ್ಲರ ಸಂದೇಹಗಳಿಗೆ ಉತ್ತರ ಇದೆ. ಇದು ನನ್ನ ಎರಡನೇ ಮದುವೆ. ಕೆಲವು ಬಾರಿ ದೈಹಿಕವಾಗಿ ಮದುವೆಯಾಗುತ್ತೇವೆ ಆದರೆ ಯಾವುದೇ ಭಾವನಾತ್ಮಕ ಸಂಬಂಧವನ್ನು ಹೊಂದಿರುವುದಿಲ್ಲ. ನಾವು ಎಲ್ಲರ ಒಳಿತಿಗಾಗಿ ಮುಂದುವರಿಯಬೇಕು. ನಾವು ಮದುವೆಯಾಗುತ್ತಿದ್ದೇವೆ. ನನಗೆ ಯಾವುದೇ ಅಪರಾಧ ಎನಿಸುತ್ತಿಲ್ಲ. ಆದರೆ ಕೃತಜ್ಞತೆ ಮಾತ್ರ ಇದೆ. ಆದ್ದರಿಂದ ಅದನ್ನು ವ್ಯಕ್ತಪಡಿಸುತ್ತಿದ್ದೇನೆ ಎಂದು ನೆಟ್ಟಿಗರೊಬ್ಬರ ಕಾಮೆಂಟ್‌ಗೆ ನಟಿ ಸ್ಪಷ್ಟನೆ ಕೊಟ್ಟಿದ್ದರು.
ಇನ್ನೂ ಮಾನಸ ಭಾವಿ ಪತಿ ಪ್ರೀತಮ್ ಚಂದ್ರ ಅವರು ಫುಟ್ ಬಾಲ್ ಪ್ಲೇಯರ್ ಆಗಿದ್ದಾರೆ. ಅವರು ಫುಟ್ ಬಾಲ್ ಅಕಾಡೆಮಿ ಕೂಡ ನಡೆಸುತ್ತಿದ್ದಾರೆ.